ಪಂಚಾಂಗ ಪರಿಚಯ – ದಿವಸಗಳು

ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಕಾಲವನ್ನು ನಾವು “ಹಗಲು” ಎಂತಲೂ, ಮತ್ತು ಸೂರ್ಯಾಸ್ತದಿಂದ ಸೂರ್ಯೋದಯದವರೆಗಿನ ಕಾಲವನ್ನು “ರಾತ್ರಿ” ಎಂತಲೂ ಕರೆಯುತ್ತೆವೆ. ಹಗಲು ಮತ್ತು ರಾತ್ರಿಗಳನ್ನು ಸೇರಿಸಿ ಒಂದು ದಿನ ಅಥವಾ ದಿವಸ ಎಂದು ಕರೆಯುತ್ತೆವೆ. ಹಗಲಿನ ಪ್ರಮಾಣವನ್ನು “ದಿನಮಾನ” ಎಂತಲೂ, ರಾತ್ರಿಯ ಪ್ರಮಾಣವನ್ನು “ರಾತ್ರಿಮಾನ” ಎಂತಲೂ ಕರೆಯಲಾಗಿದೆ. ಆಯನಗತಿಯ ಪ್ರಭಾವದಿಂದ ಈ ದಿನಮಾನ – ರಾತ್ರಿಮನಗಳ ಪ್ರಮಾಣ ಸಮಾನವಾಗಿರದೆ, ಬದಲಾಗುತ್ತಲಿರುತ್ತದೆ. ದಿನಮಾನ ವಿಷಯವನ್ನು ಮುಂದೆ ವಿಷದವಾಗಿ ಹೇಳಲಿದ್ದೆನೆ.

ಧರ್ಮಾಚರಣೆಗಳಿಗೆ ಅನುಗುಣವಾಗಿ ದಿವಸ ಅಥವಾ ದಿನ ಶಬ್ದವನ್ನು ವ್ಯವಹಾರಿಕವಾಗಿ ಎರಡು ಅರ್ಥಗಳಲ್ಲಿ ಬಳಸಲಾಗುತ್ತದೆ. ಮೊದಲನೇಯದಾಗಿ ದಿವಸವನ್ನು ಹಗಲು ಎಂಬರ್ಥದಲ್ಲಿ ಉಪಯೋಗಿಸಲಾಗುತ್ತದೆ. ಎರಡನೇಯದಾಗಿ ಹಗಲು ಮತ್ತು ರಾತ್ರಿ ಸೇರಿ ಆಗುವ ೨೪ ಘಂಟೆಗಳ ಕಾಲಾವಧಿಯನ್ನು ಸಹ ದಿವಸವೆಂದೆ ಕರೆಯಲಾಗುತ್ತದೆ. ಇದಕ್ಕೆ ಜ್ಯೋತಿಷ್ಯದಲ್ಲಿ “ಅಹೋರಾತ್ರ” ಎಂದು ಕರೆಯಲಾಗಿದೆ.

ಪಂಚಾಂಗಗಣಿತದ ಪ್ರಕಾರ ನಲ್ಕು ಪ್ರಕಾರದ ದಿವಸಗಳಿವೆ. ಚಾಂದ್ರ ದಿವಸ, ಸಾವನ ದಿವಸ, ಸೌರ ದಿವಸ, ನಾಕ್ಷತ್ರ ದಿವಸ.

(೧) ಚಾಂದ್ರ ದಿವಸ (Lunar Day) – ಪಂಚಾಂಗದಲ್ಲಿ ಮೊದಲನೇಯ ಅಂಗವಾದ “ತಿಥಿ”ಯೇ ಚಾಂದ್ರ ದಿವಸವಾಗಿದೆ. ಇದು ಸೂರ್ಯ-ಚಂದ್ರರ ಗತಿಗಳನ್ನು ಅನುಸರಿಸುತ್ತದೆ. ಇದರ ಗಣಿತವನ್ನು ಮುಂದೆ ತಿಥಿಯ ಬಗ್ಗೆ ಹೇಳುವಾಗ ವಿಷದೀಕರಿಸುತ್ತೆನೆ.

(೨) ಸಾವನ ದಿವಸ (Civil Day) – ಎರಡು ಅನುಗತ ಸೂರ್ಯೋದಯಗಳ ಮಧ್ಯದ ಕಾಲಾವಧಿಯು ಒಂದು ಸಾವನ ದಿವಸ. ದಿನಮಾನದ ಹಾಗೆ ಇದೂ ಸಹ ವ್ಯತ್ಯಾಸವಾಗುತ್ತಿರುತ್ತದೆ. ಇದನ್ನು “ಮೇದಿನಿ ದಿವಸ” ಎಂತಲೂ ಕರೆಯುತ್ತಾರೆ.

(೩) ಸೌರ ದಿವಸ (Solar Day) – ಇದು ಕಾಂತಿವೃತ್ತದಲ್ಲಿ ಸೂರ್ಯನ ಚಲನೆಗೆ ಸಂಬಂಧಿಸಿದಂತೆ ಇರುತ್ತದೆ. ಭೂಮಿಯ ಮೇಲಿನ ವೀಕ್ಷಕನಿಗೆ ಅನುಗುಣವಾಗಿ ಸೂರ್ಯನ ಪಥವೆ “ಕಾಂತಿವೃತ್ತ” ಅಥವಾ “ಅಪಾಮಂಡಲ”. ಕಾಂತಿವೃತ್ತವು ಹೆಸರೇ ಸೂಚಿಸುವಂತೆ ೩೬೦ ಅಂಶಗಳಷ್ಟಿರುತ್ತದೆ. ಈ ಕಾಂತಿವೃತ್ತದಲ್ಲಿ ೧ ಅಂಶ (೧ ಡಿಗ್ರಿ) ಚಲಿಸಲು ಸೂರ್ಯನಿಗೆ ಸಂದುವ ಅವಧಿಯೇ ಒಂದು ಸೌರ ದಿವಸ.

(೪) ನಾಕ್ಷತ್ರ ದಿವಸ (Sidereal Day) – ಯಾವುದೇ ನಕ್ಷತ್ರ ಅಥವಾ ಗ್ರಹ ಅಥವಾ ಕೇವಲ ಒಂದು ಬಿಂದು, ನಕ್ಷತ್ರ ಚಕ್ರವನ್ನು ಒಂದು ಸಾರಿ ಸುತ್ತಲು ತಗಲುವ ಸಮಯ. ಇದು ಭುಮಿಯ ಮೇಲೆ ನಕ್ಷತ್ರ ಚಕ್ರಗತಿಗೆ ಅನುಗುಣವಾಗಿರುತ್ತದೆ (ಇದರ ವಿಷದೀಕರಣ ಮುಂದೆ ಮಾಡುತ್ತೆನೆ) . ಇದು ೨೩ಗಂಟೆ ೫೬ನಿಮಿಷ ೪.೦೯ಸೆಕೆಂಡುಗಳಷ್ಟು ಸರಾಸರಿಯಾಗಿರುತ್ತದೆ.

ಒಂದು ದಿವಸವು ೨೪ಗಂಟೆ(ಹೋರಾ)ಯದ್ದಾಗಿರುತ್ತದೆ. ಭಾರತೀಯ ಕಾಲಗಣನೆಯಲ್ಲಿ ಒಂದು ದಿವಸವು ೬೦ಘಟಿ ಅಥವಾ ಘಳಿಗೆಯಾಗಿರುತ್ತದೆ. ಒಂದು ದಿನವನ್ನು ೬೦ಭಾಗಗಳಾಗಿ ಮಾಡಿ ಗಣಿತಹಾಕುವ ಪ್ರಾಚೀನ ಪ್ರಕಾರವಿದು. ಒಂದು ಘಟಿಯು ಮತ್ತೆ ೬೦ವಿಘಟಿಯಷ್ಟಾಗಿರುತ್ತದೆ.

೬೦ ಘಟಿ = ೨೪ ಗಂಟೆಗಳು
೨^೧/೨ ಘಟಿ (೨.೫ ಘಟಿ) = ೧ ಗಂಟೆ
೧ ಘಟಿ = ೨೪ ನಿಮಿಷ

(ಮುಂದಿನ ಲೇಖನಗಳಿಗೆ…….)

This entry was posted in ಪಂಚಾಂಗ and tagged , . Bookmark the permalink.

4 Responses to ಪಂಚಾಂಗ ಪರಿಚಯ – ದಿವಸಗಳು

  1. Navya R N says:

    pls give the complete detail for these date of birth..
    15 august 1971
    29 april 1990

    • Guru Naik says:

      Complete details or life reading is not possible because it takes lots of time. Only date of birth is not sufficient, time and place of birth, gender and name are also needed. So please ask 2 prashnas (questions) instead per person, and I will try to explain.

  2. Vijayalaxmi says:

    pl give me details of child born 29 dec 2011 panchang patrika

    reply as soon as possilbe

    time 5 : 40 PM evening Mumbai – gender male

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s