ಲಗ್ನಾದಿ ದ್ವಾದಶ ಭಾವಗಳು-ಸ್ಥಾನಗಳು

ಜಾತಕ ಅಥವಾ ಕುಂಡಲಿಗಳಲ್ಲಿ ಹನ್ನೆರಡು ಮನೆಗಳಿರುತ್ತವೆ, ಅವುಗಳನ್ನು ಭಾವ ಅಥವಾ ಸ್ಥಾನಗಳೆಂದು ಕರೆಯಲಾಗುತ್ತದೆ. ಈ ಹನ್ನೆರಡು ಭಾವಗಳು ಮನುಷ್ಯನ ಜೀವನದ ವಿವಿಧ ವಿಷಯಗಳ ಸೂಚಕಗಳಾಗಿವೆ. ದ್ವಾದಶ ಭಾವಗಳ ಸೂಕ್ಷ್ಮ ಪರಿಚಯವು ಜ್ಯೋತಿಷ್ಯ ಮತ್ತು ಫಲನಿರ್ದೇಶಕ್ಕೆ ಅತ್ಯಂತ ಅವಶ್ಯಕ. ಈ ಲೇಖನದಲ್ಲಿ ಇವುಗಳ ಸ್ಥೂಲ ಪರಿಚಯವನ್ನು ಮಾಡಿಕೊಳ್ಳೋಣ. ನಮ್ಮ ದೇಶದಲ್ಲಿ ಜಾತಕವನ್ನು ಬರೆಯುವ ಅನೇಕ ಪ್ರಕಾರಗಳಿವೆ. ಮುಖ್ಯವಾಗಿ ಉತ್ತರದೇಶ ಮತ್ತು ದಕ್ಷಿಣದೇಶೀಯ ಎಂಬ ಎರಡು ಪ್ರಕಾರಗಳು ಪ್ರಸಿದ್ಧ. ನಾನು ಹೆಚ್ಚು ಉತ್ತರದೇಶೀಯ ಕುಂಡಲಿಪ್ರಕಾರವನ್ನು ಅನುಸರಿಸುತ್ತೇನೆ, ಈ ಪ್ರಕಾರಕ್ಕೆ ಕೆಲವು ಸೌಲಭ್ಯಗಳಿವೆ. ಆದರೆ ಎಲ್ಲ ಲೇಖನಗಳಲ್ಲಿ ಮೇಲೆ ಹೇಳಿದ ಎರಡೂ ಪ್ರಕಾರಗಳನ್ನು ಕೊಡುತ್ತೇನೆ. (ಕೆಳಗೆ ಕೊಟ್ಟಿರುವ ಎರಡು ಚಿತ್ರಗಳನ್ನು ನೋಡಿ, ಸ್ಥಾನಗಳನ್ನು ಎಣಿಸುವ ಪ್ರಕಾರವನ್ನು ತಿಳಿದುಕೊಳ್ಳಿ). ಈ ಜಾತಕಗಳನ್ನು ನೋಡುವ (ಅಥವಾ ಓದುವ) ರೀತಿಯು ಸ್ವಲ್ಪ ಭಿನ್ನವಾಗಿದ್ದು ಈ ಬಗ್ಗೆ ಮುಂಬರುವ ಲೇಖನಗಳಲ್ಲಿ ಹೇಳುತ್ತೇನೆ.

ಜಾತಕವನ್ನು ಜನ್ಮ ಕುಂಡಲಿ, ಜನ್ಮ ಪತ್ರಿಕೆ, ಜನ್ಮ ಚಕ್ರ ಇತ್ಯಾದಿ ದೇಶ-ಭಾಷಾನುಸಾರಿಯಾಗಿ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ಜನ್ಮ ಸಮಯದ ಗ್ರಹಗಳ ಗತಿ ಮತ್ತು ಆಕಾಶದಲ್ಲಿ ಅವುಗಳ ಸ್ಥಾನವಿಶೇಷಗಳನ್ನು ಗಣಿತಾಗತವಾಗಿ ಚಿತ್ರಿಸುವುದನ್ನೆ ಜಾತಕವೆಂದು ಸ್ಥೂಲವಾಗಿ ಕರೆಯಬಹುದು. ಜಾತಕಗಳ ರಚನೆಗೆ ಪಂಚಾಂಗಗಳು ಅವಶ್ಯಕ.

ಉತ್ತರ ಭಾರತದಲ್ಲಿ ಪ್ರಚಲಿತ ಕುಂಡಲಿ

ದಕ್ಷಿಣ ಭಾರತದಲ್ಲಿ ಪ್ರಚಲಿತ ಜಾತಕ

ಹೋರಾದಯಸ್ತನುಕುಟುಂಬಸಹೋತ್ಥಬಂಧು-
ಪುತ್ರಾರಿಪತ್ನಿಮರಣಾನಿ ಶುಭಾಸ್ಪದಾಯಾಃ |
ರಿಃಫಾಖ್ಯಮಿತ್ಯುಪಚಯಾನ್ಯರಿಕರ್ಮಲಾಭ-
ದುಶ್ಚಿಕ್ಯಸಂಜ್ಞಿತಗೃಹಾಣಿ ನ ನಿತ್ಯಮೇಕೇ || (ಬೃಹಜ್ಜಾತಕ ೧-೧೫)

ಕುಂಡಲಿಯ ಮೊದಲನೇಯ ಮನೆಯನ್ನು ಲಗ್ನವೆಂದು ಕರೆಯಲಾಗುತ್ತದೆ. ಇದು ಜನ್ಮಕಾಲದಲ್ಲಿ ಪೂರ್ವದಿಕ್ಕಿನಲ್ಲಿ ರಾಶಿಚಕ್ರದ ಮೇಲೆ ಉದಯಿಸುವ ಬಿಂದುವಾಗಿರುತ್ತದೆ (ಇದರ ಬಗ್ಗೆ ಮುಂದೆ ನೋಡೋಣ). ಲಗ್ನವನ್ನು ತನುವೆಂದು, ಎರಡನೇಯ ಮನೆಯನ್ನು ಕುಟುಂಬ, ಮೂರನ್ನು ಸಹೋತ್ಥ (ಭ್ರಾತಾ), ನಾಲ್ಕನ್ನು ಬಂಧು, ಐದನ್ನು ಪುತ್ರ, ಆರನ್ನು ಅರಿ (ಶತ್ರು), ಎಳನ್ನು ಪತ್ನಿ, ಎಂಟನ್ನು ಮರಣ, ಒಂಬತ್ತನ್ನು ಶುಭ, ಹತ್ತನ್ನು ಆಸ್ಪದ, ಹನ್ನೊಂದನ್ನು ಆಯ ಮತ್ತು ಹನ್ನೆರಡನೇಯ ಮನೆಯನ್ನು ರಿಃಫವೆಂದು ಕರೆಯಲಾಗುತ್ತದೆ.
ಈ ಸ್ಥಾನಗಳಿಗೆ ಭಾವವೆಂಬ ಸಂಜ್ಞೆಯು ಇರುತ್ತದೆ. ಮೇಲೆ ಹೆಳಲ್ಪಟ್ಟ ಸ್ಥಾನಗಳಿಗೆ ಜ್ಯೋತಿಷ್ಯದಲ್ಲಿ ಅನೇಕ ಪಾರಿಭಾಷಿಕ ಸಂಜ್ಞೆಗಳಿವೆ, ಅವುಗಳನ್ನು ಭಾವಗಳಿಂದ ಸೂಚಿತ ಕಾರಕತ್ವವೆಂದು ಸ್ಥೂಲವಾಗು ಹೇಳಬಹುದು. ಹನ್ನೆರಡು ಭಾವಗಳಿಂದ ತಿಳಿಯಲ್ಪಡುವ ವಿಷಯಗಳನ್ನು ಮುಂದಿನ ಲೇಖನದಲ್ಲಿ ನೋಡೋಣ.

ಮೇಲ್ಕಂಡ ಹನ್ನೆರಡು ಮನೆಗಳ ಪೈಕಿ ಕೆಲವನ್ನು ಸೇರಿಸಿಕೊಂಡು ಅನೇಕ ಸಂಜ್ಞೆಗಳನ್ನು ಮಾಡಲಾಗಿದೆ. ಉದಾಹರಣೆಗೆ ಕೇಂದ್ರವೆಂದರೆ 1,4,7,10ನೇಯ ಸ್ಥಾನಗಳು. ಇವುಗಳಲ್ಲಿ ಮಹತ್ವವಾದವುಗಳನ್ನು ನೋಡೋಣ.
ಕೇಂದ್ರ: 1-4-7-10, ಪಣಪರ: 2-5-8-11, ಆಪೋಕ್ಲಿಮ: 3-6-9-12
ತ್ರಿಕೋಣ: 5-9, ಉಪಚಯ: 3-6-10-11, ಅನುಪಚಯ: ಉಪಚಯಗಳನ್ನು ಹೊರತುಪಡಿಸಿ ಉಳಿದ ಸ್ಥಾನಗಳು,
ಇವುಗಳಲ್ಲದೇ ಇನ್ನೂ ಅನೇಕ ಸಂಜ್ಞೆಗಳಿರುತ್ತವೆ, ಪ್ರಾಸಂಗಿಕವಾಗಿ ಅವುಗಳ ಬಗ್ಗೆ ತಿಳಿದುಕೊಳ್ಳೋಣ.

This entry was posted in ಜ್ಯೋತಿಷ, ಹೋರಾ ಶಾಸ್ತ್ರ and tagged , , , , , , , , , . Bookmark the permalink.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s