Category Archives: ಗ್ರಹಣ

ಶುಕ್ರ ಅಧಿಕ್ರಮಣ – 6 ಜೂನ 2012

ಖಗೋಳವು ಅನೇಕ ವಿದ್ಯಮಾನಗಳ ಆಗರ. ಮನುಷ್ಯನು ತನ್ನ ಜೀವಿತಾವಧಿಗಳಲ್ಲಿ ಇಂಥಹ ಘಟನೆಗಳಿಗೆ ಸಾಕ್ಷಿಯಾಗಿರುತ್ತಾನೆ. ಆದರೆ ಕೆಲವೊಮ್ಮೆ ಪ್ರಾಯಶಃ ನಮ್ಮ ಜೀವಮಾನದಲ್ಲೇ ಅತ್ಯಂತ ವಿರಳ ಎನ್ನಬಹುದಾದ ಖಗೋಳೀಯ ಘಟನೆಗಳು ಘಟಿಸುತ್ತವೆ. ಶುಕ್ರನ ಅಧಿಕ್ರಮಣ ಅಥವಾ ಶುಕ್ರ ಸಂಕ್ರಮಣವು (Transit of Venus) ಇಂತಹ ಅತ್ಯಂತ ವಿರಳ ವಿದ್ಯಮಾನಗಳಲ್ಲಿ ಒಂದು. ಈ ಶತಮಾನದಲ್ಲಿ ಕೇವಲ ಎರಡು ಬಾರಿ ಸಂಭವಿಸುವ … Continue reading

Posted in ಖಗೋಳ, ಗೋಚಾರ, ಗ್ರಹಣ | Tagged , , , , , | 1 Comment

ನವಗ್ರಹ ಪರಿಚಯ

ವೈದಿಕ ಜ್ಯೋತಿಷ್ಯದ ಅಧ್ಯಯನವೆಂದರೆ ನವಗ್ರಹಗಳ ಅಧ್ಯಯನವೇ ಆಗಿದೆ. ಸೂರ್ಯಾದಿ ನವಗ್ರಹಗಳು, ಮೇಷಾದಿ ರಾಶಿಗಳು ಮತ್ತು ಲಗ್ನಾದಿ ದ್ವಾದಶ ಭಾವಗಳು, ಇವು ಜ್ಯೋತಿಷ್ಯದ ಅಧ್ಯಯನದ ಮೊದಲ ಪಾಠ. ನವಗ್ರಗಗಳಿಂದಲೆ ನಮ್ಮ ಜೀವನದ ಕಾರ್ಯಕಲಾಪ. ಗ್ರಹಗಳೇ ಪ್ರೇರಕ ಮತ್ತು ಕಾರಕಗಳಾಗಿ ನಮ್ಮ ಬದುಕಿನ ಸಮಗ್ರ ಚಟುವಟಿಕೆಗಳಿಗೆ ಕಾರಣಗಳಾಗಿವೆ. ಗ್ರಹಾಧೀನಂ ಜಗತ್ಸರ್ವಂ ಗ್ರಹಾಧೀನಾ ನರಾವರಾಃ | ಸೃಷ್ಟಿಸಂರಕ್ಷಣಸಂಹಾರಾಃ ಸರ್ವೇ ಚಾಪಿ … Continue reading

Posted in ಗ್ರಹಣ, ನವಗ್ರಹ ಪರಿಚಯ, ನವಗ್ರಹಗಳು | Tagged , | Leave a comment

ಚಂದ್ರ ಗ್ರಹಣ – ದಾನ, ಪಾರಾಯಣ, ಪರಿಹಾರ

ಡಿಸೆಂಬರ್ 10ರ ಚಂದ್ರಗ್ರಹಣವು ರೋಹಿಣಿ ಮತ್ತು ಮೃಗಶಿರಾ ನಕ್ಷತ್ರಗಳಲ್ಲಿ (ವೃಷಭ ರಾಶಿ) ನಡೆಯಲಿದೆ. (ಈ ಕುರಿತು ಹಿಂದಿನ ಲೇಖನವನ್ನು ನೋಡಿ) ಆದ್ದರಿಂದ ತ್ರಿಜನ್ಮ ನಕ್ಷತ್ರಜಾತರಾದ ರೋಹಿಣಿ, ಮೃಗಶಿರಾ ಮತ್ತು ಆರ್ದ್ರಾ – ಈ ನಕ್ಷತ್ರ ಮತ್ತು ರಾಶಿಯವರು ದಾನಗಳನ್ನು ಮಡಬೇಕು. ಚಂದ್ರಗ್ರಹಣಕ್ಕೆ ವಿಶೇಷವಾಗಿ ಚಂದ್ರಬಿಂಬ ಮತ್ತು ನಾಗ ಪ್ರತಿಮೆಯ ದಾನವನ್ನು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸುವರ್ಣ ಅಥವಾ … Continue reading

Posted in ಗ್ರಹಣ, ಜ್ಯೋತಿಷ, ಶಾಂತಿ-ಪರಿಹಾರೋಪಾಯ | Tagged , , , , , , , , , , , | Leave a comment

ಕೇತುಗ್ರಸ್ತ ಚಂದ್ರಗ್ರಹಣ – ಡಿಸೆಂಬರ್ 10, 2011

ಸೂರ್ಯ ಮತ್ತು ಭೂಮಿಯನ್ನು ಸುತ್ತುತ್ತಿರುವ ಚಂದ್ರನ ನಡುವೆ ಭೂಮಿಯು ಬಂದು ಅದರ ನೆರಳು ಚಂದ್ರಬಿಂಬವನ್ನು ಮರೆಮಾಡುವ ಅವಕಾಶೀಯ ವಿದ್ಯಮಾನವೇ ಚಂದ್ರಗ್ರಹಣ. ಇಂಥಹ ವಿದ್ಯಮಾನ ಇದೇ ಡಿಸೆಂಬರ್ 10ರಂದು ಘಟಿಸಲಿದ್ದು ಭಾರತದಾದ್ಯಂತ ಪೂರ್ಣವಾಗಿ ಗೋಚರಿಸಲಿದೆ. ಭೂಚ್ಛಾಯಾಂ ಸ್ವಗ್ರಹಣೇ ಭಾಸ್ಕರಂ ಅರ್ಕಗ್ರಹಣೇ ಪ್ರವಿಶತಿ ಇಂದುಃ | (ಬೃಹತ್ಸಂಹಿತಾ) “ಚಂದ್ರನು ತನ್ನ ಗ್ರಹಣದಲ್ಲಿ ಭೂಛಾಯೆಯನ್ನು ಅಂತೆಯೇ ಸೂರ್ಯಗ್ರಹಣದಲ್ಲಿ ಸೂರ್ಯಬಿಂಬವನ್ನು ಪ್ರವೇಶಿಸುತ್ತಾನೆ”. … Continue reading

Posted in ಗ್ರಹಣ, ಜ್ಯೋತಿಷ | Tagged , , , , , , , , | 1 Comment